ಈ ಭಾಗದಲ್ಲಿ ಸಿಂಕ್-ಸೌನ್ಡ್ ಅಥವಾ ಚಿತ್ರೀಕರಣ ಸ್ಥಳದಲ್ಲಿಯೇ ಧ್ವನಿ ಮುದ್ರಿಸಿಕೊಳ್ಳುವ ವಿಧಾನದ ಕುರಿತು ಎರಡು ಮಾತು. ಭಾರತದಲ್ಲಿ ಹೆಚ್ಚಿನ ಚಿತ್ರಗಳು ಇಂದಿಗೂ ಡಬ್ಬಿಂಗ್ ಪ್ರಕ್ರಿಯೆಯ ಮೂಲಕವೇ ಮಾತುಗಳನ್ನು ಹೊಂದುತ್ತವೆ. ಆದರೆ ಹೊರದೇಶಗಳಲ್ಲಿ ಇಂದು ಹೆಚ್ಚಿನ ಚಿತ್ರಗಳು ಚಿತ್ರೀಕರಣ ಸಂದರ್ಭದಲ್ಲೇ ಮುದ್ರಿಸಿಕೊಂಡ ಧ್ವನಿಯನ್ನೇ...
ಧ್ವನಿಯ ಬಗ್ಗೆ ಇನ್ನಷ್ಟು ಮಾತನಾಡುವ ಮುಂಚೆ ಒಂದಿಷ್ಟು ಚಿತ್ರಗಳ ಕಡೆಗೆ ಬರೋಣ. ಸಿನೆಮಾದಲ್ಲಿ ಒಂದು ಚಿತ್ರ ಏನನ್ನು ಸಾಧಿಸುತ್ತದೆ? ಕ್ಯಾಮರಾದ ಮುಂದೆ ನಡೆಯುತ್ತಿರುವ ಒಂದು ಘಟನೆಯನ್ನು ಅದು ಪ್ರಾಮಾಣಿಕವಾಗಿ ದಾಖಲಿಸುತ್ತದೆ. ಈ ಪ್ರಾಮಾಣಿಕ ದಾಖಲೀಕರಣ ಎನ್ನುವ ದತ್ತ-ಅಂಶವನ್ನೇ ಬಳಸಿಕೊಂಡು, ಕಥೆಯನ್ನು ಹೇಳಿದಾಗ ಆ ಕಥೆಯ ಬಗ್ಗೆ...
ಸೀರಿಯಲ್‍ಗಳ ಟಿ.ಆರ್.ಪಿ ಹೆಚ್ಚುತ್ತಲೇ ಇದೆ. ಅದರಲ್ಲಿ ಅತ್ತೆ ಸೊಸೆ ಪರಸ್ಪರ ಜುಟ್ಟು ಹಿಡಿದು ಜಗಳವಾಡುತ್ತಲೇ ಇದ್ದಾರೆ. ಮಾತು ಮಾತಿಗೆ ದೇವರ ಕೋಣೆಗೆ ಹೋಗಿ ದೀವಾರ್ ಸಿನೆಮಾದಂತೆ ದೇವರನ್ನು ಬ್ಲಾಕ್ ಮೈಲ್ ಮಾಡಿ ತಮ್ಮ ಕೆಲಸ ಗಿಟ್ಟಿಸುತ್ತಲೇ ಇದ್ದಾರೆ. ದಿನ ದಿನ ಕರ್ವಾಚೌತ್ ಮಾಡಿ ತಮ್ಮ ಗಂಡಂದಿರ ಆಯುಷ್ಯ...
ಸಿನೆಮಾ ಒಂದು ದೃಶ್ಯ ಮಾಧ್ಯಮ ಎನ್ನುವುದು ತಪ್ಪಾಗುತ್ತೆ. ಸಿನೆಮಾ ಒಂದು ದೃಶ್ಯ ಹಾಗೂ ಶ್ರವ್ಯ ಮಾಧ್ಯಮ. ಧ್ವನಿ ಸಂಯೋಜನೆ ಎನ್ನುವುದನ್ನು ವಿಶೇಷವಾಗಿ ಕಲಿಸುವಂಥಾ ಒಂದು ಶಾಸ್ತ್ರವೇ ಇದೆ. ಕನ್ನಡ ಚಿತ್ರಗಳಲ್ಲಿ ಧ್ವನಿ ಸಂಯೋಜನೆ ಹೆಚ್ಚಿನ ಕಡೆ ಉಪೇಕ್ಷಿತವಾಗಿದೆ. ಒಂದು ಚಿತ್ರವನ್ನು ನೊಡುವಾಗ ಪಾತ್ರಗಳು ನಡೆದಾಡಿದಾಗ ಹೆಜ್ಜೆಯ...
ಕನ್ನಡದ ಪ್ರಮುಖ ಲೇಖಕಿಯರಲ್ಲೊಬ್ಬರಾದ ವೈದೇಹಿಯವರ ಕಥೆಯೊಂದನ್ನು ಆಯ್ದುಕೊಂಡು ಕೃಷ್ಣ ಮೂರ್ತಿ ಕವತ್ತಾರರು ನಿರ್ದೇಶಿಸಿ, ಸೀತಾ ಕೋಟೆಯವರು ಅಭಿನಯಿಸಿರುವ ಅಲೆಗಳಲ್ಲಿ ಅಂತರಂಗ ಇತ್ತೀಚೆಗೆ ಬೆಂಗಳೂರಿನ ಕೆ.ವಿ.ಸುಬ್ಬಣ್ಣ ಆಪ್ತ ಕಲಾಮಂದಿರದಲ್ಲಿ ಪ್ರದರ್ಶನಗೊಂಡಿತು. ಪ್ರದರ್ಶನ ತುಂಬಾ ಮುದನೀಡಿತು. ಎಲ್ಲಾ ವಿಭಾಗಗಳಲ್ಲೂ ನಾಟಕವು...
Recent Comments